Skip to content
Vishwas
Go back

ಜಾತ್ರೆಯಲಿ ಒಂಟಿಯಾಗಿ ಕೂತಿರುವೆ

1 min read

ಜಾತ್ರೆಯಲಿ ಒಂಟಿಯಾಗಿ ಕೂತಿರುವೆ, ತುಸು ಪ್ರೀತಿ, ಖರೀದಿಸು. ಚರ್ಚೆಯ ನೆಪವಷ್ಟೇ ಸಾಕು, ಮಾತೊಂದ ಬೆಳೆಸಲು. ಬಲು ದುಬಾರಿ ಏನಿಲ್ಲ ಜೇಬು ತುಂಬಿಸಿಕೊಳ್ಳಲು, ತುಟಿ ಅಂಚಿಂದ ನಗು ಜಾರಿದರೆ ಸಾಕು.

ಆದರೆ ಷರತ್ತೊಂದಿದೆ ಅದನೀಗ ಕೋರಿಕೆಗೆ ತಿದ್ದಿರುವೆ ನೀ ಮರಳಿ ಬರಬೇಕು

ಹೆಸರಿಡದೆ ಕಾಲಿ ಬಿಟ್ಟಿರುವೆ, ನಾಮ ಫಲಕ. ಪುರುಸೊತ್ತು ಮಾಡಿ ತುಂಬಿ ಬಿಡು, ಅದೇನೋ ತವಕ. ಉರಿ ಬಿಸಿಲಿಗೆ ಬಾಡುತಿದೆ ನಾ ತಂದ ಮಲ್ಲಿಗೆ ಚಿಮ್ಮಿಸುತ ನೀರು, ಕುಳಿತಿರುವೆ ಬೇಜಾರಿಲ್ಲದೆ. ಅವಸರವೇನಿಲ್ಲ… ಬೆವರಿಳಿಸದೆ ಬಾ ನೀನು ಮೆಲ್ಲಗೆ.

ಆದರೆ ಷರತ್ತೊಂದಿದೆ ಅದನೀಗ ಕೋರಿಕೆಗೆ ತಿದ್ದಿರುವೆ ನೀ ಮರಳಿ ಬರಬೇಕು

ಇಂದಿಲ್ಲದಿದ್ದರೆ ನಾಳೆ ಸಿಗುವೆ ನಾನಿಲ್ಲೇ ಇರುವೆ ಅದೆಷ್ಟೋ ದಿನ ಕಾದಿರುವೆ, ಇನ್ನೊಂದು ದಿನ ನನಗಲ್ಲ ಹೆಚ್ಚು ದಾರಿ ನೋಡುನೋಡುತ ಗಡ್ಡ ಬೆಳೆಸಿರುವೆ ತುಸು ಪ್ರೀತಿ ಹುಚ್ಚು. ಚಂದಿರನ ಬೆಳಕಿಗೆ, ಅಂಗಡಿ ತೆರೆದಿರುವೆ ದಾರಿ ತಪ್ಪಿ ನೀ ಈ ಕಡೆ ಸುಳಿದರೂ ಎಚ್ಚರಿಸು ತಪ್ಪದೆ.

ಆದರೆ ಷರತ್ತೊಂದಿದೆ ಅದನೀಗ ಕೋರಿಕೆಗೆ ತಿದ್ದಿರುವೆ ನೀ ಮರಳಿ ಬರಬೇಕು

ಇದೀಗ ಜಾತ್ರೆ ಮುಗಿದು ಕಳೆದಿದೆ ವಾರ. ಗಾಳಿ ತುಂಬಿದ ಜೇಬು, ತುಂಬಾ ಭಾರ
ಅದೇನೇ ಇರಲಿ, ಬರುವ ವರುಷ ನಾ ಮರಳಿ ಬರುವೆ ನಿನಗೆ ಸಿಗುವೆ…


Share this post:

Read next

Previous Post
Thailand diaries.
Next Post
Speckles of dust

Something to say?

Thoughts, corrections, or just want to say hello — drop a note below.