Skip to content
Vishwas
Go back

ಪ್ರಾಚೀನ ಕಾಲದ ಪ್ರೀತಿ

•1 min read

ಪ್ರಾಚೀನ ಕಾಲದ ಪ್ರೀತಿ ನನದು, ಹಳೇ ಸಂಗೀಸು ಚೀಲದಲಿ ಹೊತ್ತು ತಂದಿದ್ದು. ಎರಡು ಸಾಲಲಿ ಹೇಳಲು ಆಗದು, ಇನ್ನೂರು ಪುಟದ ನೋಟುಬುಕ್ಕಿನುದ್ದಕ್ಕೂ ಗೀಚಿದ್ದು.

ಪಟ ಪಟ ಬಿದ್ದ ಮಳೆಗೆ, ಚಿಮ್ಮಿದ ಕೆಸರಲ್ಲಿ, ಹುಟ್ಟಿತ್ತು… ಸದ್ದಿಲ್ಲದೆ ಬಂದ ಅಲೆಯ, ಉಪ್ಪು ನೀರಿನಲಿ, ಅಡಗಿತ್ತು… ಕಟ್ಟಿಟ್ಟ ಬುತ್ತಿಯಲಿ, ಮುಚಿಟ್ಟ ಪೆಟ್ಟಿಗೆಯಲಿ, ಸಪ್ಪಗೆ, ಮೆತ್ತಗೆ, ಮಲಗಿತ್ತು…ನನ್ನ ಪ್ರೀತಿ.

ಪ್ರಾಚೀನ ಕಾಲದ ಪ್ರೀತಿ ನನದು, ಹಳೇ ಸಂಗೀಸು ಚೀಲದಲಿ ಹೊತ್ತು ತಂದಿದ್ದು.

ಕಾದು ಕುಳಿತ್ತಿದ್ದೆ ಒಣ ಹೊಲದಲ್ಲಿ ಬಾರದ ಅಂಚೆಗೆ, ಅಮಾವಾಸ್ಯೆ ಚಂದಿರನ ಜೊತೆಗೆ… ಮುಂದೊಂದಿನ ಮುಂಜಾವಿನ ಬಿಸಿ ನೀರಿನ ಒಲೆಗೆ, ತುತ್ತಾಯಿತು ನನ್ನ ಪ್ರೀತಿಯ ಹೊತ್ತಗೆ… ಹಚಿಟ್ಟ ಬೆಂಕಿಯಲಿ, ಹಿಡಿದಿಟ್ಟ ಬಿಸಿ ಉಸಿರಲಿ, ಉರಿಯಿತು, ಸದಿಲ್ಲದೆ, ನಾನು ಬಚಿಟ್ಟ ಕನಸು.

ಪ್ರಾಚೀನ ಕಾಲದ ಪ್ರೀತಿ ನನದು, ಇನ್ನೂರು ಪುಟದ ನೋಟುಬುಕ್ಕಿನುದ್ದಕ್ಕೂ ಕಂಡಿದ್ದು…


Share this post:

Read next

Previous Post
The Northern journey
Next Post
Thailand diaries.

Something to say?

Thoughts, corrections, or just want to say hello — drop a note below.